Index   ವಚನ - 574    Search  
 
ಕಾಣಬಹ ಲಿಂಗವೆಂದು ಅಗ್ಘಣಿಯನೆ ಕೊಟ್ಟು ಕೆಳೆಯಾದಿರಲ್ಲಾ, ಲೋಕಕ್ಕೆ! ನಿರಾಳಲಿಂಗಕ್ಕೆ ಕೊಡಲರಿಯರು, ಕಂಡವರ ಕಂಡು ಕಂಡಂತೆ, ಉಂಡವರ ಕಂಡು ಉಂಡಂತೆ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಇಂಥವರ ಕಂಡು ನಾಚಿತ್ತೆನ್ನ ಮನವು.