Index   ವಚನ - 575    Search  
 
ಅಷ್ಟವಿಧಾರ್ಚನೆ ಷೋಡಶೋಪಚಾರವ ಲಿಂಗಕ್ಕೆ ಮಾಡಿ, ಜಂಗಮಕ್ಕೆ ಮಾಡದವರ ಕಂಡರೆ ಭಕ್ತರೆಂತೆಂಬೆ ? ಇಂದ್ರಿಯಂಗಳ ಬೆಂಬಳಿಯಲ್ಲಿ ಹೋಗಿ, ನಿಮ್ಮ ಚರಿತ್ರವ ನೆನೆಯದವರ ಕಂಡರೆ ಶರಣರೆಂತೆಂಬೆ? ಅನಿಮಿಷದೃಷ್ಟಿಯಲ್ಲಿ ನೋಡುವರ ಅನಿಮಿಷರೆಂದೆಂಬೆನೆ? ನೀವೆ ತಾನಾಗಿ ಮೈದೋರದವರ ಕಂಡರೆ, ಎನ್ನ ವಿಸ್ತಾರವೆಂಬೆ, ಕೂಡಲಚೆನ್ನಸಂಗಮದೇವಾ.