Index   ವಚನ - 577    Search  
 
ಮಾಡುವಲ್ಲಿ ಭಕ್ತನೆ? ಮಾಟದ ಕ್ರಮವರಿಯದನ್ನಕ್ಕ. ನೀಡುವಲ್ಲಿ ಭಕ್ತನೆ? ಸಯದಾನವ ಸನ್ನಿಹಿತದ ಮರ್ಮವ ತಿಳಿಯದನ್ನಕ್ಕ. ಸುಳಿವಲ್ಲಿ ಜಂಗಮವೆ? ಸುಳಿವಲ್ಲಿ ಸೋಂಕು ತಿಳಿಯದನ್ನಕ್ಕ. ಈ ಉಭಯಕುಳವಳಿಯದನ್ನಕ್ಕ ಭವ ಹಿಂಗದು ಕೂಡಲಚೆನ್ನಸಂಗಮದೇವಾ.