ಮನದದ್ಭುತವಹಂಕಾರವಳಿಯದನ್ನಕ್ಕ
ಸದ್ಭಕ್ತಿ ಸದರವೆಂತೆಂಬೆನು?
ಕಾಯ ಸಮ್ಮೋಹಿಯನು ಲಾಂಛನಧಾರಿಯೆಂಬೆನು,
ಜೀವ ಸಮ್ಮೋಹಿಯನು ಸಂಸಾರಿಯೆಂಬೆನು.
ಇದು ಕಾರಣ, ಮಿಗೆ ಮಿಗೆ ಮೀಸಲು
ಸಲೆ ಸಹಜ ಕೂಡಲಚೆನ್ನಸಂಗನೆಂಬೆನು.
Art
Manuscript
Music Courtesy:
Video
TransliterationManadadbhutavahaṅkāravaḷiyadannakka
sadbhakti sadaraventembenu?
Kāya sam'mōhiyanu lān̄chanadhāriyembenu,
jīva sam'mōhiyanu sansāriyembenu.
Idu kāraṇa, mige mige mīsalu
sale sahaja kūḍalacennasaṅganembenu.