Index   ವಚನ - 617    Search  
 
ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ, ಇರುಳು ಹಗಲೆಂದು ಮನದಲ್ಲಿ ತಾಳದವ, ತಾಳೋಷ್ಠ ಸಂಪುಟಕ್ಕೆ ಬಾರದವ, ಭವಚ್ಛೇದ ಕಾಮಭಂಜನ ಕಾಯವಿಲ್ಲದವ, ಕಾಲನ ಗೆದ್ದವ, ಮಾಯವ ತೊರೆದವ, ಮತ್ತೊಂದನರಿಯದವ ನಮ್ಮ ಕೂಡಲಚೆನ್ನಸಂಗನನರಿದು ಸುಖಿಯಾದವ.