Index   ವಚನ - 621    Search  
 
ಅಂದಂದಿಂಗೆ ಬಂದ ಪದಾರ್ಥವನೆಂದೆಂದೂ ತಾನುಂಬ ಕೈಯಲಿ ಕೊಡುವುದು ಎಂತೊ? ಲಿಂಗಕ್ಕೆ ನೀಡುವರೆಂತೊ? ಲಿಂಗಕ್ಕೆ ಕೊಡುವರೆಂತೊ ? ಲಿಂಗಕ್ಕೆ ಸಲುವುದೆಂತೊ? ಶಿವಶಿವಾ! ಮಂಚವೊಂದೆ, ಕಂಚು ಬೇರೆಂಬ ಪ್ರಪಂಚಿಯನೊಲ್ಲ ಕೂಡಲಚೆನ್ನಸಂಗಮದೇವಾ.