Index   ವಚನ - 627    Search  
 
ಗುರುವುಳ್ಳಾತ ಶಿಷ್ಯನಲ್ಲ, ಪ್ರಸಾದವುಳ್ಳಾತ ಭಕ್ತನಲ್ಲ. ಲಿಂಗೈಕ್ಯನಾದರೆ ಸ್ಥಾವರಲಿಂಗ ವಿರೋಧಿಯಾಗಿರಬೇಕು. ಕಾಯಕ್ಕೆ ಸಾಹಿತ್ಯವೆಲ್ಲಿಯಾದರೆಯೂ ಉಂಟು, ಆತ್ಮಸಾಹಿತ್ಯವಪೂರ್ವ. ಆಚಾರಸಾಹಿತ್ಯ ಲೋಕ, ಅನಾಚಾರಸಾಹಿತ್ಯ ಶರಣ, ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಾನು ಅನಾಚಾರಿಯಾದ ಕಾರಣ ಎನಗೆ ಪ್ರಸಾದ ನೆಲೆಗೊಂಡಿತ್ತು.