Index   ವಚನ - 628    Search  
 
ಭವಿಯ ತಂದು ಭಕ್ತನ ಮಾಡೂದನಾಚಾರ, ಭಕ್ತನ ತಂದು ಭವಿಯ ಮಾಡೂದಾಚಾರ. ಭವಿ ಮುಟ್ಟಿ ಪ್ರಸಾದ, ಭಕ್ತ ಮುಟ್ಟಿ ಓಗರ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಭವಿಯ ಪ್ರಸಾದವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು.