Index   ವಚನ - 658    Search  
 
ದೇಹದೊಳಗಣ ದೇಹಿಯೆನ್ನಬಹುದೆ ನಿಮ್ಮ ಶರಣನ? ಅನ್ನ ಪಾನಾದಿಗಳೊಗಣ ಅನ್ನಪಾನವೆಂದೆನ್ನಬಹುದೆ ಪ್ರಸಾದವ? ಎನಬಾರದಯ್ಯಾ, ಎನ್ನ ತಂದೆ! ಸಾಧನದೊಳಗಣ ಸಂಯೋಗವೆಂತಿದ್ದುದು ಅಂತಿದ್ದುದಾಗಿ. ಇದು ಕಾರಣ, ಶ್ರುತಿ ಸ್ಮೃತಿಗೋಚರ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣರು.