Index   ವಚನ - 659    Search  
 
ಲಿಂಗವೆಂದರಿದಂಗೆ ಹಿಂದಿಲ್ಲ, ಜಂಗಮವೆಂದರಿದಂಗೆ ಮುಂದಿಲ್ಲ, ಇದೇ ಶಿವಾಚಾರ, ಇದೇ ಶಿವದೊಡಕು, "ಆತ್ಮಾನಂ ಪ್ರಕೃತಿಂ ಚ ಭಾವಯೇತ್" ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಮದೇವನು ಮುಟ್ಟಬಾರದ ಠಾವ ಮರೆಗೊಂಡಿಪ್ಪ.