Index   ವಚನ - 660    Search  
 
ಕಣ್ಣೊಳಗೆ ಕಣ್ಣಿದ್ದು ಕಾಣಲೇಕರಿಯರಯ್ಯಾ? ಕಿವಿಯೊಳಗೆ ಕಿವಿಯಿದ್ದು ಕೇಳಲೇಕರಿಯರಯ್ಯಾ? ಘ್ರಾಣದೊಳಗೆ ಘ್ರಾಣವಿದ್ದು ವಾಸಿಸಲೇಕರಿಯರಯ್ಯಾ? ಜಿಹ್ವೆಯೊಳಗೆ ಜಿಹ್ವೆಯಿದ್ದು ರುಚಿಸಲೇಕರಿಯರಯ್ಯಾ? ಸ್ಪರ್ಶದೊಳಗೆ ಸ್ಪರ್ಶವಿದ್ದು ಮುಟ್ಟಿಸಲೇಕರಿಯರಯ್ಯಾ? ಪ್ರಾಣದೊಳಗೆ ಪ್ರಾಣವಿದ್ದುದನೇಕರಿಯರಯ್ಯಾ? ಕಾಯದೊಳಗೆ ಕಾಯವಿದ್ದು ಬಿಡದು, ಬೇರಾಗದು. ಕೂಡಲಚೆನ್ನಸಂಗಯ್ಯನಿಕ್ಕಿದ ಭೇದವ ಬಿಡಿಸಲಾಗದು.