Index   ವಚನ - 661    Search  
 
ಉಂಬ ಬಾಯೊಳು ಊಡಿಸಿಕೊಂಬ ಬಾಯಿಯಿದೇನಯ್ಯಾ? ನೋಡುವ ನಯನದೊಳು ನೋಡಿಸಿಕೊಂಬ ನಯನವಿದೇನಯ್ಯಾ? ಕೇಳುವ ಶ್ರೋತ್ರದೊಳು ಕೇಳಿಸಿಕೊಂಬ ಶ್ರೋತ್ರವಿದೇನಯ್ಯಾ? ವಾಸಿಸುವ [ನಾಸಿಕದೊಳು] ವಾಸಿಸಿಕೊಂಬ ನಾಸಿಕವಿದೇನಯ್ಯಾ? ಮುಟ್ಟುವ ಪರುಶದೊಳು ಮುಟ್ಟಿಸಿಕೊಂಬ ಪರುಶವಿದೇನಯ್ಯಾ? [ಇಂತಿವರೊಳಗೆ] ನೀನಿಪ್ಪ ಅನುವನಾರು ಬಲ್ಲರು ಕೂಡಲಚೆನ್ನಸಂಗಮದೇವಾ ?