ಆಯತಲಿಂಗದಲ್ಲಿ ಆಗಾಗಿ ಭಕ್ತನೆನಿಸೂದಯ್ಯಾ,
ಸ್ವಾಯತಲಿಂಗದಲ್ಲಿ ಆಗಾಗಿ ಯುಕ್ತನೆನಿಸೂದಯ್ಯಾ,
ಸಂಯೋಗಲಿಂಗದಲ್ಲಿ ಆಗಾಗಿ ಶರಣನೆನಿಸೂದಯ್ಯಾ,
ಪ್ರಾಣಕ್ಕೆ ಪ್ರಾಣವಾಗಿ ಉಭಯ ಪ್ರಾಣವೆಂದೆನಿಸೂದಯ್ಯಾ,
ಘನಕ್ಕೆ ಘನವಾದಲ್ಲಿ ಮನವೇದ್ಯನೆಂದೆನಿಸೂದಯ್ಯಾ,
ಕೂಡಲಚೆನ್ನಸಂಗಯ್ಯಾ ಲಿಂಗಸರ್ವಾಂಗದಲ್ಲಿ
ಅನುಭಾವದಿಂದಧಿಕವೆನಿಸೂದಯ್ಯಾ.
Art
Manuscript
Music
Courtesy:
Transliteration
Āyataliṅgadalli āgāgi bhaktanenisūdayyā,
svāyataliṅgadalli āgāgi yuktanenisūdayyā,
sanyōgaliṅgadalli āgāgi śaraṇanenisūdayyā,
prāṇakke prāṇavāgi ubhaya prāṇavendenisūdayyā,
ghanakke ghanavādalli manavēdyanendenisūdayyā,
kūḍalacennasaṅgayyā liṅgasarvāṅgadalli
anubhāvadindadhikavenisūdayyā.
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ