Index   ವಚನ - 682    Search  
 
ಲಿಂಗಸ್ಥಲ ಲಿಂಗಸ್ಥಲದಲ್ಲಿಯೇ ನಿಂದುದು, ಜಂಗಮಸ್ಥಲ ಜಂಗಮಸ್ಥಲದಲ್ಲಿಯೇ ನಿಂದುದು, ಪ್ರಸಾದಸ್ಥಲ ಪ್ರಸಾದಸ್ಥಲದಲ್ಲಿಯೇ ನಿಂದುದು, ಈ ತ್ರಿವಿಧಸ್ಥಲ ತ್ರಿವಿಧದಲ್ಲಿಯೇ ನಿಂದುದು, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.