Index   ವಚನ - 693    Search  
 
ಸಕಳ ನಿಷ್ಕಳನಯ್ಯಾ ನಿಷ್ಕಳ ಸಕಳನಯ್ಯಾ, ಸಕಳನಾಗಿ ಸಂಸಾರಿಯಲ್ಲ, ನಿಷ್ಕಳನಾಗಿ ವೈರಾಗಿಯಲ್ಲ, ಸಂಸಾರಿಯಲ್ಲದ ಸಂಗ, ವೈರಾಗಿಯಲ್ಲದ ನಿಸ್ಸಂಗ, [ಉಭಯ] ಸಂಗದಿಂದ ಮಹಂತಿಕೆಯನೆಯ್ದಿಹನಾಗಿ. "ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ" [ಎಂದುದಾಗಿ] ಕೂಡಲಚೆನ್ನಸಂಗನೆಂತಿದ್ದಡಂತೆ ಕ್ಷೀಣನಲ್ಲ.