Index   ವಚನ - 707    Search  
 
ಎಂಜಲು ಮಾತು ನುಡಿವ ರಂಜಕರೆಲ್ಲರು ಮಿಗೆಮಿಗೆ ಮೀಸಲ ತಾವೆತ್ತ ಬಲ್ಲರು? ಮೀಸಲು ಎಂಜಲಹುದೆ? ಎಂಜಲು ಮೀಸಲಹುದೆ? ಮಾತಿನ ಬಣಬೆಯ ಮೇದ ಪಶುಪ್ರಾಣಿಯಂತೆ ಎಂಜಲು ಮಾತನೆ ನುಡಿಯುತ್ತಿಹರು, ಲಿಂಗಸಕೀಲಸಂಯೋಗದ ವರ್ಮಸ್ಥಳವನವರೆತ್ತ ಬಲ್ಲರು! ಕೂಡಲಚೆನ್ನಸಂಗಯ್ಯಾ, ಉಪದೇಶ ಸೂತಕಿಗಳೆಲ್ಲರೂ ರೌರವನರಕಿಗಳು.