Index   ವಚನ - 709    Search  
 
ಒಡಲುಗೊಂಡು ಒಡಲವಿಡಿಯದೆ ಒಡಲಿಲ್ಲದ ನಿಜವ ಬೆರಸೆಲವೊ! ನರರು ಸುರರು ಕಿನ್ನರರು ಖೇಚರರು ಪರಮಪದವಿಯನರಿಯದ ಕಾರಣ ಭವದೊಳಗೆ ಸಿಲುಕಿದರು. ಕೂಡಲಚೆನ್ನಸಂಗನ ನಿಜರೂಪನೆ ಬೆರಸಿರೊ ಮುಮುಕ್ಷುಗಳಿರಾ.