ಕಾಯದ ಕೊನೆಯ ಮೊನೆಯ ಮೇಲಣ ಲಿಂಗವ
[ಇಷ್ಟ]ಲಿಂಗವೆಂದು ಪೂಜಿಸುವರು,
ಜೀವದ ಕೊನೆಯ ಮೊನೆಯ ಮೇಲಣ ಲಿಂಗವ
ಪ್ರಾಣಲಿಂಗವೆಂದೆಂಬರು,
ಭಾವದ ಕೊನೆಯ ಮೊನೆಯ ಮೇಲಣ ಲಿಂಗವ
[ಭಾವ]ಲಿಂಗವೆಂದು ಪೂಜಿಸುವರು.
ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ?
ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ?
ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ?
ಕಾಯ ಲಿಂಗವೇ? ಅಲ್ಲ, ಜೀವ ಲಿಂಗವೇ? ಅಲ್ಲ,
ಭಾವ ಲಿಂಗವೇ? ಅಲ್ಲ,
"ಅದೃಶ್ಯೇ ಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ|
ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ"||
ಎಂದುದಾಗಿ-
ಇಷ್ಟಲಿಂಗವ ಪೂಜಿಸಿ
ದೃಷ್ಟಲಿಂಗದಲ್ಲಿ ನೆರೆಯಬಲ್ಲರೆ
ಕೂಡಲಚೆನ್ನಸಂಗಯ್ಯಾ, ಅವರ
ಸರ್ವಾಂಗಲಿಂಗಿಗಳೆಂಬೆನು.
Art
Manuscript
Music
Courtesy:
Transliteration
Kāyada koneya moneya mēlaṇa liṅgava
[iṣṭa]liṅgavendu pūjisuvaru,
jīvada koneya moneya mēlaṇa liṅgava
prāṇaliṅgavendembaru,
bhāvada koneya moneya mēlaṇa liṅgava
[bhāva]liṅgavendu pūjisuvaru.
Kāya liṅgavendu pūjisuva khaṇḍitaranēnembe?
Jīva liṅgavendu pūjisuva upajīvigaḷanēnembe?
Bhāva liṅgavendu pūjisuva bhramitaranēnembe?
Kāya liṅgavē? Alla, jīva liṅgavē? Alla,
bhāva liṅgavē? Alla,
Adr̥śyē bhāvanā nāsti dr̥śyamēva vinaśyati|
avarṇamakṣaraṁ brahma kathaṁ dhyāyanti yōginaḥ||
endudāgi-
iṣṭaliṅgava pūjisi
dr̥ṣṭaliṅgadalli nereyaballare
kūḍalacennasaṅgayyā, avara
sarvāṅgaliṅgigaḷembenu.