Index   ವಚನ - 728    Search  
 
ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ? ಭಾವಶುದ್ಧವಿಲ್ಲ, ಮಹೇಶ್ವರರೆಂತಪ್ಪಿರಯ್ಯಾ? ಅರ್ಪಿತದನುವರಿದು ಅರ್ಪಿಸಲರಿಯಿರಿ, ಪ್ರಸಾದವ ಗ್ರಹಿಸುವ ಪರಿಯೆಂತಯ್ಯಾ? ನಡೆ-ನುಡಿ ಎರಡಾಗಿ ಇದೆ, ಪ್ರಾಣಲಿಂಗಸಂಬಂಧಿಯೆಂತಾದಿರಿ? ಇಂದ್ರಿಯಂಗಳು ಭಿನ್ನವಾಗಿ, ಶರಣರಾದ ಪರಿಯೆಂತಯ್ಯಾ? ವಿಧಿ ನಿಷೇಧ ಭ್ರಾಂತಿ ಮುಕ್ತಿಯಾದ ಪರಿಯನರಿಯಿರಿ, ಐಕ್ಯರೆಂತಪ್ಪಿರಿ? ಈ ಪಡುಸ್ಥಲದ ಕ್ರಿಯಾಕರ್ಮವರ್ಮ ಆರಿಗೆಯೂ ಅರಿಯಬಾರದು. ಈ ವರ್ಮವರಿದಡೆ ಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ.