Index   ವಚನ - 732    Search  
 
ಲಿಂಗವೆಂದು ಪೂಜಿಸಿದರೆ ಅಂಗದೊಡನೆ ಉಳಿಯಿತ್ತು. ಅಂಗದೊಡನೆ ಉಳಿದ ಲಿಂಗವ [ಹಿಂಗದೆ] ಪೂಜಿಸಬೇಕು. ಹಿಂಗದ ಪೂಜೆಯನರಿದಡೆ ಪ್ರಾಣಲಿಂಗದಾಪ್ಯಾಯನವನರಿಯಬೇಕು. ಪ್ರಾಣಲಿಂಗದಾಪ್ಯಾಯನವನರಿದಡೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನೆನಿಸುವ.