Index   ವಚನ - 737    Search  
 
ಶಿವಕಳಶ ಗುರುಕಳಶವೆಂದು ಹೆಸರಿಟ್ಟುಕೊಂಡು ನುಡಿವಿರಿ. ಶಿವಕಳಶ ಗುರುಕಳಶವ ನೀವು ಬಲ್ಲರೆ ಹೇಳಿರೇ. ಶಿವಕಳಶವಲ್ಲ ಇದು ಕುಂಭಕಳಶ. "ಓಂ ಧಾಮಂತೇ ಗೋತಮೋ ಆಪೋ ಬೃಹತೀ ಧಾಮಂತೇ ವಿಶ್ವಂ ಭುವನಮಧಿಶ್ರಿತಮಂತಃ ಸಮುದ್ರೇ ಹೃದ್ಯಂತರಾಯುಷಿ! ಅಪಾಮನೀಕೇ ಸಮಿಧೇಯ ಅಭೃತಸ್ತಮಶ್ಯಾಮ ಮಧುಮಂತಂತ ಊರ್ಮಿಮ್" ಇದು ಕಾರಣ, ಕೂಡಲಚೆನ್ನಸಂಗಯ್ಯಾ ಶಿವಕಳಶ ಗುರುಕಳಶದ ಹೊಲಬ ನಮ್ಮ ಬಸವಣ್ಣ ಬಲ್ಲ.