Index   ವಚನ - 759    Search  
 
ಅಪ್ಪುವನಪ್ಪಿದ ಆಲಿಕಲ್ಲಿನಂತೆ, ವಾಯುವನಪ್ಪಿದ ಪರಿಮಳದಂತೆ, ಲಿಂಗವನಪ್ಪಿದ ಶರಣ. ಆತನ ದೇಹಿಯೆನಬಹುದೆ? ಅನಲನನಪ್ಪಿದ ಕರ್ಪುರದಂತೆ-ಈ ತ್ರಿವಿಧ ನಿರ್ಣಯ ಕೂಡಲಚೆನ್ನಸಂಗಾ ನಿಮ್ಮಲ್ಲಿ.