Index   ವಚನ - 760    Search  
 
ಗ್ರಾಮಮಧ್ಯದ ಧವಳಾರದೊಳಗೊಂದು ಸತ್ತ ಹೆಣನಿರುತ್ತಿರಲು, ಗ್ರಾಮ ಸುತ್ತಿ ಬರುತಿದ್ದ ರಕ್ಕಸಿ ಆ ಸತ್ತುದ ಕಂಡಳಲ್ಲಾ. ಗ್ರಾಮ ನನ್ನ ಕಾಹು, ಗ್ರಾಮದಲ್ಲಿ ನಾನಿಪ್ಪೆ, ಇದಾರೊ ಕೊಂದವರು? ನಾನು ಕೊಲ್ಲದ ಮುನ್ನ, ಅದು ತಾನೆ ಸತ್ತಡೆ, ಎನಗಿದು ಸೋಜಿಗವು. ಸತ್ತುದು ಗ್ರಾಮವ ಕೆಡಿಸಿತ್ತು, ಇನ್ನಿದ್ದರೆ ಎನ್ನನೂ ಕೆಡಿಸಿತ್ತು. ಇಲ್ಲಿದ್ದವರಿಗುಪಟಳ ನೋಡಾ! [ಎಂದು] ಗ್ರಾಮ ಬಿಟ್ಟು ಹೋಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.