Index   ವಚನ - 776    Search  
 
ಅರಿಯಲಿಲ್ಲದ ಅರಿವು, ಮರೆಯಲಿಲ್ಲದ ಮರಹು. ನೋಟವಿಲ್ಲದ ನೋಟ, ಕೂಟವಿಲ್ಲದ ಕೂಟ. ಬೆರಸಲಿಲ್ಲದ ಬೆರಗು ನಿಂದುದು, ಕೂಡಲಚೆನ್ನಸಂಗಾ ಲಿಂಗೈಕ್ಯವು.