Index   ವಚನ - 777    Search  
 
ನೋಡಿ ನೋಟವ ಮರೆದು, ಕೂಡಿ ಕೂಟವ ಮರೆದು, ಬಯಲ ಸಮರಸಕ್ಕೆ ಮರುಳಾಯಿತ್ತಲ್ಲಾ, ಜೀವಪ್ರಾಣನ ಭೇದವಳಿದು ನಿಜವದಕ್ಕಾಯಿತ್ತಲ್ಲಾ. ಅನ್ಯಚಿಹ್ನವಳಿದು ತನ್ನತಾ ಮರೆಯಿತ್ತು, ಕೂಡಲಚೆನ್ನಸಂಗಾ ನೀನೆಂದೆ ನಿಂದಿತಲ್ಲಾ.