Index   ವಚನ - 781    Search  
 
ಭವವಿಲ್ಲದ ಭಕ್ತನ ಪರಿಯ ನೋಡಾ! ಮನ ಪ್ರಾಣ ಮುಕ್ತಿಭಾವ ವಿರಹಿತ ಒಡಲಿಲ್ಲದ ಜಂಗಮದ ಪರಿಯ ನೋಡಾ! ಸಿಡಿಲು ಮಿಂಚಿನ ರೂಹನೊಂದೆಡೆಯಲ್ಲಿ ಹಿಡಿಯಲುಂಟೆ? ಈ ಉಭಯ ಒಂದಾದವರ ಕಂಡರೆ ನೀವೆಂಬೆನಯ್ಯಾ. ಕೂಡಲಚೆನ್ನಸಂಗಮದೇವಾ.