Index   ವಚನ - 783    Search  
 
ಕುಲವಿಲ್ಲದ ಅಕುಲನು, ಶರೀರವಿಲ್ಲದ ಸಂಬಂಧಿ, ಕೋಪವಿಲ್ಲದ ಶಾಂತನು, ಮತ್ಸರವಿಲ್ಲದ ಮಹಿಮನು. ಕರ್ಮವಿಲ್ಲದ ಕಾರಣಿಕನು, ಅರ್ಪಿತವಿಲ್ಲದ ಆಪ್ಯಾಯನಿ, ಜಂಗಮವಿಲ್ಲದ ಸಮಶೀಲನು, ಲಿಂಗವಿಲ್ಲದ ನಿರುತನು. ಪ್ರಸಾದವಿಲ್ಲದ ಪರಿಣಾಮಿ, ಕೂಡಲಚೆನ್ನಸಂಗಾ ನಿಮ್ಮ ಶರಣನು.