Index   ವಚನ - 796    Search  
 
ಭಕ್ತನೆಂಬೆನೆ? ಭಕ್ತಸ್ಥಲ ಮುನ್ನವೆಯಿಲ್ಲ, ಮಾಹೇಶ್ವರನೆಂಬೆನೆ? ಮಾಹೇಶ್ವರಸ್ಥಲ ಮುನ್ನವೆಯಿಲ್ಲ, ಪ್ರಸಾದಿಯೆಂಬೆನೆ? ಪ್ರಸಾದಿಸ್ಥಲ ಮುನ್ನವೆಯಿಲ್ಲ, ಪ್ರಾಣಲಿಂಗಿಯೆಂಬೆನೆ? ಪ್ರಾಣಲಿಂಗಿಸ್ಥಲ ಮುನ್ನವೆಯಿಲ್ಲ, ಶರಣನೆಂಬೆನೆ? ಶರಣಸ್ಥಲ ಮುನ್ನವೆಯಿಲ್ಲ, ಐಕ್ಯನೆಂಬೆನೆ? ಐಕ್ಯಸ್ಥಲ ಮುನ್ನವೆಯಿಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.