Index   ವಚನ - 809    Search  
 
ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ. ಇಂತೀ, ಚತುರ್ವಿಧವನಿಂಬಿಟ್ಟುಕೊಂಡು ತನ್ನಲ್ಲಿ ಸತ್ಯವಾಗಿಪ್ಪ ಕೂಡಲ ಚೆನ್ನಸಂಗನಲ್ಲಿ ಸತ್ಯಪ್ರಸಾದಿಯೆಂಬೆನು.