Index   ವಚನ - 810    Search  
 
ಆಯತ ಪ್ರಸಾದಿ, ಸ್ವಾಯತ ಪ್ರಸಾದಿ, ಸನ್ನಿಹಿತ ಪ್ರಸಾದಿ, ಸಮಯಭೋಗ ಪ್ರಸಾದಿ. ಪ್ರಸಾದವೆ ಪ್ರಾಣವಾಗಿ, ಪ್ರಸಾದವು ಪ್ರಸಾದಿಯನೆ ಅವಗ್ರಹಿಸಿಕೊಂಡಿಪ್ಪುದು, ಪ್ರಸಾದವೂ ಪ್ರಸಾದಿಯೂ ಏಕವಾಗಿದ್ದಡಾನು ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ.