Index   ವಚನ - 824    Search  
 
ಸಂಕಲ್ಪ ವಿಕಲ್ಪವೆಂಬುದಿಲ್ಲ, [ವಿಕಲ್ಪ ಸಂಕಲ್ಪವೆಂಬುದಿಲ್ಲ]. ಭಾವ ಅಭಾವವೆಂಬುದಿಲ್ಲ, ಅಭಾವ ಭಾವವೆಂಬುದಿಲ್ಲ. ಪದಾರ್ಥ ಪ್ರಸಾದವೆಂಬುದಿಲ್ಲ, ಪ್ರಸಾದ ಪದಾರ್ಥವೆಂಬುದಿಲ್ಲ. ಅದೇನು ಕಾರಣ? ನಿಃಪದಾರ್ಥ ನಿಃಪ್ರಸಾದ ಕೂಡಲಚೆನ್ನಸಂಗಯ್ಯಾ. ಗುರುಲಿಂಗವಾರೋಗಣೆಯ ಮಾಡಿದ ಕಾರಣ.