Index   ವಚನ - 833    Search  
 
ಕಾಯ ಪ್ರಸಾದ ಒಂದೆಡೆಯಲ್ಲಿ, ಜೀವ ಪ್ರಸಾದ ಒಂದೆಡೆಯಲ್ಲಿ, ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ಪ್ರಸಾದಿ ಪ್ರಸಾದವನೆ ಪತಿಕರಿಸಿಕೊಂಡಿಪ್ಪ. ಓಗರ ಪ್ರಸಾದವೆಂಬ ಸಂಕಲ್ಪವಿರಹಿತ ಪ್ರಸಾದಿ, ಭ್ರಾಂತು ಸೂತಕವಳಿದುಳಿದ ಪ್ರಸಾದಿ, ಕೂಡಲಚೆನ್ನಸಂಗನಲ್ಲಿ ತಾನೆ ಪ್ರಸಾದಿ.