Index   ವಚನ - 835    Search  
 
ನಿಷ್ಠಾಂಗದಲ್ಲಿ, ದೃಷ್ಟಾಂಗದಲ್ಲಿ, ದ್ರಷ್ಟಂಗದಲ್ಲಿ, ದೃಷ್ಟ್ಯಂಗದಲ್ಲಿ, ನಷ್ಟಾಂಗದಲ್ಲಿ ಮುಟ್ಟಿ ನಿಷ್ಠೆಯಾದ ಪ್ರಸಾದಿ. ಇಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯಪ್ರಸಾದಿ.