Index   ವಚನ - 837    Search  
 
ಸ್ಥಾವರಾರಾಧನೆಯ ಪೂಜನೆಯ ಪುರಸ್ಕಾರದ ಅಂಗರಚನೆಯ ರತಿಯಿಲ್ಲದ ಪ್ರಸಾದಿ, ಜಂಗಮಗುಣಾದಿ ಸಂಗವ ಮನಕ್ಕೆ ತಾರದ ಪ್ರಸಾದಿ. ತ್ರೈಪುರುಷ ಏಕೋವರ್ಣದ ಸಂಯೋಗವಿಲ್ಲದ ಪ್ರಸಾದಿ. ನಾದದ ಸಾರಸಾರವನು ಕರಸ್ಥಲಕ್ಕೆ ತಂದು ಪರಗಮನರಹಿತ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಸಮಾಪ್ತವಾಗಿ, ಲಿಂಗಲೀಯವಾದ ಪ್ರಸಾದಿ.