Index   ವಚನ - 845    Search  
 
ಅಂಗಲೀಯ ಲಿಂಗಲೀಯ, ಅಭಾವಲೀಯ, ಸಭಾವಲೀಯ, ಸಂಗದಲ್ಲಿ ಪ್ರಸಾದಿ, ಅಕೃತವಾದ ಪ್ರಸಾದಿ. ಆಧಾರ ಆಧೇಯ ದೇವನಾಮಕ್ರೀಯನು ಮನಕ್ಕೆ ತಾರದ ಪ್ರಸಾದಿ. ಇದು ಕಾರಣ,- ಕೂಡಲಚೆನ್ನಸಂಗಾ ಮಹಾಘನದಲ್ಲಿ ನಿಂದ ಪ್ರಸಾದಿ.