Index   ವಚನ - 864    Search  
 
ಊರ್ಧ್ವಬಿಂದು ನಾದ ಮುಟ್ಟಲಿಕೆ ಜಂಗಮ, ಮಧ್ಯಬಿಂದು ಊರ್ಧ್ವ ಮುಟ್ಟಲಿಕೆ ಸ್ಥಾವರ, ಸ್ಥಾವರಬಿಂದು ಸ್ಥಾವರವಾದ ಊರ್ಧ್ವಮುಟ್ಟಲಿಕೆ ಭಕ್ತ, ಬಿಂದು ನಾದ ಮುಟ್ಟಲಿಕೆ ಭವಿ. ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ, ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ, ಭಕ್ತಂಗೆ ಕೊಡಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ.