Index   ವಚನ - 872    Search  
 
ಅಂಗದ ಮೇಲಣ ಲಿಂಗ ಹಿಂಗದಂತಿರಬೇಕು, ಅಂಗಕ್ಕೆ ಲಿಂಗಕ್ಕೆ ಸಂಬಂಧವೇನೊ ಮನ ಮುಟ್ಟದನ್ನಕ್ಕರ? ಕಾಯ ಕಾಯಕವ ಮಾಡುತ್ತಿರಲು, ಮನವು ಲಿಂಗದಲ್ಲಿ ಬೆರಸಿ ತೆರಹಿಲ್ಲದಿಪ್ಪ ಮಡಿವಾಳನ ಪರಿಯ ನೋಡಾ! ಅಂಗ ಲಿಂಗ ಸಂಗವೆಂಬ ಸಂದು ಸಂಶಯವಳಿದು, ಸರ್ವಾಂಗಲಿಂಗಸಂಬಂಧಿ ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳ ಮಾಚಯ್ಯನು!