Index   ವಚನ - 881    Search  
 
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಅಂಗವೆ ಲಿಂಗ, ಮನದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಕರಣಂಗಳೆ ಲಿಂಗ, ಪ್ರಾಣದ ಮೇಲೆ ಲಿಂಗಸಾಹಿತ್ಯವಾದ ಬಳಿಕ, ಅರಿವಿನ ವಿಷಯಾದಿಭೋಗಂಗಳೆ ಲಿಂಗ. ಅದು ಕಾರಣ ಸರ್ವಾಂಗಲಿಂಗ, ಸರ್ವಭೋಗ ಲಿಂಗಭೋಗ ಕೂಡಲಚೆನ್ನಸಂಗಮದೇವಾ.