Index   ವಚನ - 886    Search  
 
ಅಂಗದಲ್ಲಿ ಗುರುಲಿಪಿಯ ತಿಳಿಯಬೇಕು, ಮನದಲ್ಲಿ ಲಿಂಗಲಿಪಿಯ ತಿಳಿಯಬೇಕು, ಜೀವದಲ್ಲಿ ಜಂಗಮಲಿಪಿಯ ತಿಳಿಯಬೇಕು, ಪ್ರಾಣದಲ್ಲಿ ಪ್ರಸಾದಲಿಪಿಯ ತಿಳಿಯಬೇಕು. ಈ ಚತುರ್ವಿಧವೇಕವಾದ ಅನುಭವಲಿಪಿಯ ತಿಳಿದು ನೋಡಲು ಮಹಾಲಿಂಗಲಿಪಿ ಕಾಣಬಂದಿತ್ತು. ಆ ಮಹಾಲಿಂಗಲಿಪಿಯ ಮುಟ್ಟಿದ ಸುಜ್ಞಾನಿ ಬಚ್ಚ ಬರಿಯ ನಿರಾಳ, ನೀನೇ ಕೂಡಲಚೆನ್ನಸಂಗಮದೇವಾ.