ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ ದೀಕ್ಷೆಯನು
ಗುರು ತನ್ನ ಶಿಷ್ಯಂಗೆ ಉಪದೇಶಿಸಿ
ಮತ್ತೆ ಆ ಲಿಂಗದಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ
ಅರ್ಪಿತ ಪ್ರಸಾದಭೋಗವಾದಿಯಾದ ವೀರಶೈವರ
ಸಾವಧಾನ ಸತ್ಕಿೃಯಾಚಾರಂಗಳ ಹೊಲಬನರಿಯದೆ
ಭವಿಶೈವ ಭಿನ್ನಕರ್ಮಿಗಳಂತೆ ಆಂಗನ್ಯಾಸ ಕರನ್ಯಾಸ
ಪಂಚಮಶುದ್ಧಿ ಪಂಚಾಮೃತಾಭಿಷೇಕ ಶ್ರೀರುದ್ರ
ಪಂಚಬ್ರಹ್ಮಸ್ಥಳಾದಿ ಶೈವಪಂಚಪಂಚಾಕ್ಷರ
ಭೂತಾದಿ ದೇವತಾದಿ ಗಣಿಕಾಜನನಿಕರ
ಗಣನಾಕೃತ ಪರಿಪೂರಿತ ಅಕ್ಷಮಣಿ
ಭವಮಾಲಿಕಾ ಜಪೋಪಚರಿಯಂಗಳಾದಿಯಾದ
ಶೈವ ಪಾಷಂಡಕೃತ ಕರ್ಮಮಯವಪ್ಪ
ಭವಿಮಾಟಕೂಟಂಗಳನುಪದೇಶಿಸಿ
ಭವಹರನಪ್ಪ ಘನವೀರಶೈವಲಿಂಗದಲ್ಲಿ
ಮಾಡಿ ಕೂಡಿ ನಡೆಸಿಹನೆಂಬ
ಕಡುಸ್ವಾಮಿದ್ರೋಹಿಗೆ ಆ ನಿಜದೀಕ್ಷೆಗೆಟ್ಟು
ಗುರುಶಿಷ್ಯರಿರ್ವರು ನರಕಭಾಜನರಪ್ಪುದು ತಪ್ಪುದು
ಅದೆಂತೆಂದೊಡೆ "ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಸ್ತಥಾ
ಅಂಧಕೋ[s]ಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್" ಎಂದುದಾಗಿ
ಇದು ಕಾರಣ, ಗುರುಚರಪರಕರ್ತೃವಹ
ಅರುಹು ಆಚಾರ ಶರಣಸದ್ಭಾವಸಂಪದವನುಳ್ಳ
ಘನಗುರುರೂಪರಪ್ಪ ಪರಮಾರಾಧ್ಯರಲ್ಲಿ ಶರಣುವೊಕ್ಕು,
ಅಜಡಮತಿಗಳಪ್ಪ ಗುರುಶಿಷ್ಯರಿಬ್ಬರು ತಮ್ಮ ಹೊದ್ದಿದ
ಅಬದ್ಧವಪ್ಪ ಭವಿಮಾಟಕೂಟಂಗಳ ಪರಿಹರಿಸಿಕೊಂಡು,
ನಿಜವಿಡಿದು ನಡೆದು ಕೃತಾರ್ಥರಾಗಲರಿಯದೆ,
ಅಜ್ಞಾನದಿಂದಲಹಂಕರಿಸಿ
ಗುರುವಿಡಿದು ಬಂದುದ ಬಿಡಬಾರದೆಂದು
ಕಡುಮೂರ್ಖತನದಿಂ ಗುರುವಚನವನುಲ್ಲಂಘಿಸಿ
ಶರಣ ಸತ್ಕ್ರಿಯಾಚಾರಂಗಳನು ಕಡೆಮೆಟ್ಟಿಸಲವ
ತನ್ನ ಕರಸ್ಥಲದ ನಿಜವೀರಶೈವಲಿಂಗದಲ್ಲಿ ಸಲ್ಲದ
ಭವಿಶೈವ ಮಾಟಕೂಟಂಗಳ ಮಾಡಿಕೊಂಡು ನಡೆವ
ನರಕಜೀವಿಗಳು ಗುರುಮಾರ್ಗಕ್ಕೆ ಹೊರಗು.
ಅವರು ಕೊಂಬುದು ಸುರೆ
ಮಾಂಸವಲ್ಲದೆ ಅವರ್ಗೆ ಪ್ರಸಾದವಿಲ್ಲ.
ಇದು ಕಾರಣ, ಈ ಉಭಯರನ್ನು ಕೂಡಲಚೆನ್ನಸಂಗಯ್ಯ
ಸೂರ್ಯಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
Art
Manuscript
Music
Courtesy:
Transliteration
Aṅgaliṅga sambandhavanuḷḷa nijavīraśaiva dīkṣeyanu
guru tanna śiṣyaṅge upadēśisi
matte ā liṅgadalli māḍuva japa dhyāna arcane upacariya
arpita prasādabhōgavādiyāda vīraśaivara
sāvadhāna satkir̥yācāraṅgaḷa holabanariyade
bhaviśaiva bhinnakarmigaḷante āṅgan'yāsa karan'yāsa
pan̄camaśud'dhi pan̄cāmr̥tābhiṣēka śrīrudra
pan̄cabrahmasthaḷādi śaivapan̄capan̄cākṣara
bhūtādi dēvatādi gaṇikājananikara
gaṇanākr̥ta paripūrita akṣamaṇi
bhavamālikā japōpacariyaṅgaḷādiyāda
Śaiva pāṣaṇḍakr̥ta karmamayavappa
bhavimāṭakūṭaṅgaḷanupadēśisi
bhavaharanappa ghanavīraśaivaliṅgadalli
māḍi kūḍi naḍesihanemba
kaḍusvāmidrōhige ā nijadīkṣegeṭṭu
guruśiṣyarirvaru narakabhājanarappudu tappudu
adentendoḍenāmadhārakaśiṣyānāṁ nāmadhārī gurustathā
andhakō[s]ndhakarābad'dhō dvividhaṁ pātakaṁ bhavēt endudāgi
idu kāraṇa, gurucaraparakartr̥vaha
Aruhu ācāra śaraṇasadbhāvasampadavanuḷḷa
ghanagururūparappa paramārādhyaralli śaraṇuvokku,
ajaḍamatigaḷappa guruśiṣyaribbaru tam'ma hoddida
abad'dhavappa bhavimāṭakūṭaṅgaḷa pariharisikoṇḍu,
nijaviḍidu naḍedu kr̥tārtharāgalariyade,
ajñānadindalahaṅkarisi
guruviḍidu banduda biḍabāradendu
kaḍumūrkhatanadiṁ guruvacanavanullaṅghisi
śaraṇa satkriyācāraṅgaḷanu kaḍemeṭṭisalava
tanna karasthalada nijavīraśaivaliṅgadalli sallada
Bhaviśaiva māṭakūṭaṅgaḷa māḍikoṇḍu naḍeva
narakajīvigaḷu gurumārgakke horagu.
Avaru kombudu sure
mānsavallade avarge prasādavilla.
Idu kāraṇa, ī ubhayarannu kūḍalacennasaṅgayya
sūryacandraruḷḷannakka nāyakanarakadallikkuva.