Index   ವಚನ - 901    Search  
 
ಅಂಗಾಲಿಂದ ಮೊಳಕಾಲ ಪರಿಯಂತರ ಬಸವಣ್ಣ, ಮೊಳಕಾಲಿಂದ ಕಂಠ ಪರಿಯಂತರ ಚೆನ್ನಬಸವರಾಜದೇವರು ಕಂಠದಿಂದ ಮೇಲೆ ಪ್ರಭುದೇವರು. ಒಂದು ವಸ್ತು ಎರಡಾಯಿತ್ತು, ಎರಡು ವಸ್ತು ಮೂರಾಯಿತ್ತು. ಆ ಮೂರುವಸ್ತುವನು ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯನಲ್ಲಿ ಒಂದೆಯಾಯಿತ್ತು.