Index   ವಚನ - 903    Search  
 
ಅಂತರಂಗದ ನಿರವಯವದು ಲಿಂಗವೆ? ಬಹಿರಂಗದ ಸಾವಯವದು ಜಂಗಮವೆ? ಅಂತರಂಗದ ನಿರವಯವದು ಜ್ಞಾನಸೂಚನೆಯ ಭಾವವೆಂದು ನಾಚರು ನೋಡಾ. ಬಹಿರಂಗದ ಸಾವಯವ ವಿಷಯದೃಷ್ಟಿಯೆಂದು ಹೆಸರು ನೋಡಾ. ಈ ಉಭಯ ಒಂದಾದಡದು ಅಭೇದ್ಯ ಕೂಡಲಚೆನ್ನಸಂಗಾ ನಿಮ್ಮಲ್ಲಿ.