Index   ವಚನ - 905    Search  
 
ಅಂತರಂಗದಲ್ಲಿ ಪ್ರಭುದೇವರನೊಳಕೊಂಡ, ಬಹಿರಂಗದಲ್ಲಿ ಎನ್ನನೊಳಕೊಂಡ, ಈ ಉಭಯಸಂಗ ಮಧ್ಯದಲ್ಲಿ ನಿಜೈಕ್ಯನಾಗಿರ್ದನು. ಪ್ರಸಾದದಲ್ಲಿ ಪರಮಾನಂದ ಸುಖಿ, ಅರಿವಿನಲ್ಲಿ ಕುರುಹಳಿದ ಘನದ ನಿಲವು. ಕೂಡಲಚೆನ್ನಸಂಗಮದೇವಾ ಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.