Index   ವಚನ - 906    Search  
 
ಅಂತರಂಗದಲ್ಲಿ ಭಾವಿಸುವನಲ್ಲ, ಬಹಿರಂಗದಲ್ಲಿ ಬಳಸುವನಲ್ಲ. ಎರಡನತಿಗಳೆದು ತನ್ನಲ್ಲಿ ತಾನೆ ಸಹಜ ನೋಡಾ. ಅಂತರಂಗವಿಲ್ಲ ಬಹಿರಂಗವಿಲ್ಲ ಕೂಡಲಚೆನ್ನಸಂಗಾ, ನಿಮ್ಮ ಶರಣಂಗೆ.