ಅಕಾಯನೆಂಬ ಜಂಗಮ ಮತ್ಯಕ್ಕೆ ಬಂದೆನ್ನ,
ಧನ್ಯನ ಮಾಡಲೆಂದು,
ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು
ಪ್ರಸಾದವೆಂದು ಹೆಸರಿಟ್ಟನು.
ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು,
ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು,
ಆ ಜಂಗಮದ ದೇಹದಲ್ಲಿ ಜಂಗಮ ಇಹುದು.
ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು
ಶುದ್ಧನಾದೆನಯ್ಯಾ, ಕೂಡಲಚೆನ್ನಸಂಗಮದೇವಾ.