Index   ವಚನ - 929    Search  
 
ಅನ್ನದಾನವ ಮಾಡಿದಡೇನಹುದು? ಧರ್ಮವಹುದು. ಹೊನ್ನದಾನವ ಮಾಡಿದಡೇನಹುದು? ಶ್ರೀಯಹುದು. ವಸ್ತ್ರದಾನವ ಮಾಡಿದಡೇನಹುದು? ಪುಣ್ಯವಹುದು. ಹೆಣ್ಣುದಾನವ ಮಾಡಿದಡೇನಹುದು? ಫಲವಹುದು- ಇಂತೀ ಚತುರ್ವಿಧ ಕರಣಾದಿಗಳು ಶುದ್ಧವಾದರೆ ಮುಕ್ತಿಯಾಗುವುದು ಕಾಣಾ ಕೂಡಲಚೆನ್ನಸಂಗಮದೇವಾ.