Index   ವಚನ - 936    Search  
 
ಅನಾಹತಮಹೇಶ್ವರನೆಂಬಾತಂಗೆ ಪ್ರಸಾದಸ್ಥಲದ ಪ್ರಸಾದಾಶ್ರಯದ ಭವಿತ್ವದ ನೀಕರಿಸಿ, ಪ್ರಸಾದವನು ನೆಲೆಗೊಳಿಸಿ, ಅನ್ಯಥಾ ಪವನ ಆಧಾರ ಆಶ್ರಯವ ನೀಕರಿಸಿ, ದ್ವಿಜ ಪ್ರಜ ತ್ರಜವೆಂಬ ಡಿಂಬ ಮರ್ತ್ಯಕ್ಕೆ ಕಳುಹಿದಿರಿ ಬಸವಣ್ಣನನು. ಮಡಿ ಮಡಿವಾಳನನು ಒಡನೆ ಕಳುಹಿದಿರಿ. ಕನ್ನಡಿಯಾಗಿ ಭವಕ್ಕೆ ಬಾರದಂತೆ ಭಾವವ ನಿಲಿಸಿದಿರಿ. ಬಳಿಕ ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಸ್ಥಲ ನಿರ್ಧರವಾದವು. ಚಿರಕಾಲದಲ್ಲಿ ಮಹಾಸುನಾದಗಣ, ಅನಾಹತನಾದಗಣ ಸಂಪೂರ್ಣನಾಗಿಪ್ಪನಯ್ಯಾ ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು.