Index   ವಚನ - 938    Search  
 
ಅನುಶ್ರುತವ ಮಾಡೆಹೆನೆಂದು ಉಪ್ಪರಗುಡಿಯನೆತ್ತಿ ಮಾಡುವ ಭಕ್ತನ ಮನೆ, ಅಟ್ಟಿಕ್ಕುವ ಲಂದಣಗಿತ್ತಿಯ ಮನೆ. ಸರ್ವಜೀವರೊಳಗೆ ಚೈತನ್ಯಾತ್ಮಕ ಶಿವನೆಂದು ಮಾಡುವುದು, ಭೂತದಯಕಿಕ್ಕುವುದು ಸಯದಾನದ ಕೇಡು. ಸೂಳೆಯ ಮಗನಾಗಿ ಮಹಳವನಿಕ್ಕುವಡೆ ತಾಯ ಹೆಸರಾಯಿತ್ತು, ತಂದೆಯ ಹೆಸರಿಲ್ಲ-ಕೂಡಲಚೆನ್ನಸಂಗಮದೇವಾ.