ಅಯ್ಯಾ, ಕರ್ಮದಾಗರವ ಹೊಕ್ಕು,
ವಿಷಯದ ಬಲೆಯಲ್ಲಿ ಸಿಲುಕಿ,
ದೇಹಮೋಹವೆಂಬ ಮಹಾದುಃಖಕ್ಕೀಡಾಗಿ
ಸಾವುತ್ತಿದ್ದೇನೆ, ಬೇವುತ್ತಿದ್ದೇನೆ.
ಅಯ್ಯಾ ತಪ್ಪೆನ್ನದು ತಪ್ಪೆನ್ನದು.
ಈ ಮೊರೆಯ ವಿಚಾರಿಸಿ ಕಾರುಣ್ಯವ ಮಾಡು,
ಕಾರುಣ್ಯವ ಮಾಡು.
ಅಯ್ಯಾ ಆಳಿನಪಮಾನ ಆಳ್ದಂಗೆಂಬಂತೆ,
ಎನ್ನಳಲು ನಿಮಗೆ ತಪ್ಪದು.
ಕಾರುಣ್ಯವ ಮಾಡು, ಅಯ್ಯಾ ಕಾರುಣ್ಯವ ಮಾಡು,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ayyā, karmadāgarava hokku,
viṣayada baleyalli siluki,
dēhamōhavemba mahāduḥkhakkīḍāgi
sāvuttiddēne, bēvuttiddēne.
Ayyā tappennadu tappennadu.
Ī moreya vicārisi kāruṇyava māḍu,
kāruṇyava māḍu.
Ayyā āḷinapamāna āḷdaṅgembante,
ennaḷalu nimage tappadu.
Kāruṇyava māḍu, ayyā kāruṇyava māḍu,
kūḍalacennasaṅgamadēvā.