ಅಯ್ಯಾ, ಗುರುವರನ ಹೊಂದಿ
ಗುರುಪುತ್ರನಾದ ಬಳಿಕ
ಅಕಸ್ಮಾತ್ ಆ ಗುರುವಿನಲ್ಲಿ ಅನಾಚಾರ
ದುರಾಚಾರಗಳು ಮೈದೋರಿದಲ್ಲಿ,
ಅವು ಸೂಕ್ಷ್ಮವಿದ್ದಡೆ ತಿದ್ದಿಕೊಳ್ಳಬೇಕು,
ಸ್ಧೂಲವಿದ್ದಡೆ ಆ ಗುರುವ್ಯಕ್ತಿಯನುಳಿದು
ತಾನರಿದ ಗುರುತತ್ತ್ವವ ನಂಬಿ
ಸದಾಚಾರವ ಸಾಧಿಸುತ್ತಿರಬೇಕು.
ಇಂತೀ ಆಚರಣೆಯೆ ನಿಮ್ಮ ಶರಣರಿಗೆ
ಸದಾ ಸಮ್ಮತವಾಗಿರ್ಪುದು ಕಾಣಾ
ಕೂಡಲಚೆನ್ನಸಂಗಮದೇವಾ.